Wednesday, March 26, 2014

ಮುರಿದ ನನ್ನ ಕನಸು

ಪ್ರಶಾಂತವಾಗಿದ್ದ ನನ್ನ ಹೃದಯದ ಕಟ್ಟ ಪಾಡುಗಳನ್ನು ಮುರಿದು
ಚಡಪಡಿಕೆಯ ದಿನಗಳನ್ನು ಕರುಣಿಸಿದ ಮಹಾಸ್ವಾಮಿ ಹೇಗಿದ್ದೀಯ ?
ಎಲ್ಲರ ಖುಷಿಯೊಂದಿಗೆ ಚೆಲ್ಲಾಟ ಆಡೋದಂದ್ರೆ
ಎಷ್ಟು ಸುಲಭ ಅಲ್ವಾ ದೊರೆ ನಿನಗೆ?
ಬೇಕಾದ ಕಾಲಕ್ಕೆ ಸಿಗೋಲ್ಲ! ನಿನ್ನ ಹಠ ಸಾಧನೆಗೆ ನಾನೇ ಬೇಕಿತ್ತಾ? ನಿನಗೆ,
ನಿನ್ನ ಪ್ರೀತಿಗೆ ಮರುಳಾಗಿ, ವಶವಾಗಿ ಹೇಗಿದ್ದ ನಾನು ಹೇಗಾಗಿ ಹೋದೆ?
ನನ್ನ ಮನೆಯವರನ್ನೇಲ್ಲಾ ನಿನ್ನಲ್ಲೆ ಕಂಡೆ
ನನಗೆ ಎಲ್ಲಾ ಪ್ರೀತಿ ಕೊಡುವವನು ನೀನೇ ಎಂದುಕೊಂಡೆ?
ಅರೆ ಯಾಕೆ ಹೀಗಾದೆ ಅಂತ ಕಿಟಕಿಗೊರಗಿ ಯೋಚಿಸಿದರೆ
ಹೃದಯ ನಿನ್ನತ್ತ ಬೆರಳು ಮಾಡಿ ತೋರಿಸಿತ್ತೇ!
ಚಿಂದಿಯಾದ ನಿರ್ಜೀವ ವಸ್ತುಗಳನ್ನು ಒಗ್ಗೂಡಿಸಿ
ಸಜೀವ ಮಾಡುವ ಕೈಚಳಕ ನಿನ್ನದು
ಹರಿದ ನನ್ನ ಹೃದಯಕ್ಕೆ ನಿನ್ನ ಪ್ರೀತಿಯ ಆರೈಕೆ ಬೇಕಾಗಿದೆ.
ಮುರಿದ ನನ್ನ ಕನಸುಗಳಿಗೆ ನಿನ್ನ ಜೊತೆ ಬೇಕಾಗಿದೆ.....

ಸ್ನೇಹ



ಮನಸ್ಸಿನ
ಆಳದಲ್ಲಿ
ನೆನಪಿನ ಅಲೆಯಲ್ಲಿ
ಇಲುಮೆಯ
ಜೀವಕ್ಕೆ
ಪ್ರೀತಿಯ
ಹೃದಯಕ್ಕೆ
ತಂಪನ್ನ ನೀಡುವುದೇ
ಈ....................
...............ಸ್ನೇಹ.

ನಿನ್ನೊಲವಿನ



"ಅಮೃತಧಾರೆ"ಯಾಗಿ
ಬಾಳೆಂಬ ಭಾಳ ಗುಡಿಯಲ್ಲಿ
ಜೋತೆಜೊತೆಯಾಗಿ
ನಾ ಬರುವೆ
"ಮುಂಗಾರು ಮಳೆಯಂತೆ"

ಜನ್ಮ ಜನ್ಮದಾ
ಜನುಮದ ಜೋಡಿಯಾಗಿ
ಬದುಕಿನಲ್ಲಿ ಆಸರೆಯ
ಧೃವತಾರೆಯಾಗಿ
ನಿನ್ನೊಲವಿನ ಹಾದಿಯ
ಸಪ್ತಪದಿಯಲ್ಲಿ
ಬೆಳದಿಂಗಳ ಬಾಲೆಯಾಗಿ
ನಾ ಬರುವೆ!
-----------------
*****