Wednesday, February 23, 2011

ಹುಡುಗಿ ಬೇಕಾಗಿದ್ದಾಳೆ

 

ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೇಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಅಡ್ರೆಸ್‌ಗೆ ಮಾಡಿ
ಈ-ಮೇಲ್ !!

Tuesday, February 22, 2011

ಮನಸು


ಮನಸೇ
ಓ ಮನಸೇ

ನಿನ್ನ ಮನಸಲ್ಲಿ
ಅದೆಷ್ಟೋ ಕನಸೇ

ಆ ಮನಸಿನ
ಕನಸುಗಳು
ಈಡೇರಬೇಕೆಂಬ
ಬಯಕೆ

ಆದರೆ
ಆ ಬಯಕೆಯು
ಒಂದು  ಕನಸಾಗಿಯೇ
ಉಳಿಯಿತಲ್ಲೆ ಓ ಮನಸೇ.......................


ಇಂಚರ


ಮೇನಕೆಗೆ
ಅಸೂಯೆ ಹುಟ್ಟಿಸುವ
ಬ್ಯೂಟಿ ಇವಳು

ಸೂರ್ಯನಿಗೆ ಯಾಕೆ,
ಚಂದ್ರನಿಗೆ ಸಾಟಿ
ಇವಳು
 
ಜಿನಜಿನಗುವ ಮಳೆ ಇವಳು
ಜುಳು ಜುಳು ಹರಿಯವ
ಜರಿ ಇವಳು

ಸರಿಗಮದ ಸ್ವರ ಇವಳು
ಸುರಲೋಕದ
ಶ್ರೃತಿ ಇವಳೇ

ನನ್ನನ್ನೂಳಗಿನ
ಹೃದಯದ ಅಂಗಳದಲ್ಲಿ
ರಂಗೂಲಿಯ ಬಿಡಿಸಿ

ಭಾನಂಚಿನ ಮರೆಯಲಿ
ಇಣುಕಿ ಕಣ್ಣೋಡೆದಳು
ಅವಳೇ  ಕನಸಿನ ಇಂಚರ  ....................................................................