Wednesday, March 26, 2014

ಮುರಿದ ನನ್ನ ಕನಸು

ಪ್ರಶಾಂತವಾಗಿದ್ದ ನನ್ನ ಹೃದಯದ ಕಟ್ಟ ಪಾಡುಗಳನ್ನು ಮುರಿದು
ಚಡಪಡಿಕೆಯ ದಿನಗಳನ್ನು ಕರುಣಿಸಿದ ಮಹಾಸ್ವಾಮಿ ಹೇಗಿದ್ದೀಯ ?
ಎಲ್ಲರ ಖುಷಿಯೊಂದಿಗೆ ಚೆಲ್ಲಾಟ ಆಡೋದಂದ್ರೆ
ಎಷ್ಟು ಸುಲಭ ಅಲ್ವಾ ದೊರೆ ನಿನಗೆ?
ಬೇಕಾದ ಕಾಲಕ್ಕೆ ಸಿಗೋಲ್ಲ! ನಿನ್ನ ಹಠ ಸಾಧನೆಗೆ ನಾನೇ ಬೇಕಿತ್ತಾ? ನಿನಗೆ,
ನಿನ್ನ ಪ್ರೀತಿಗೆ ಮರುಳಾಗಿ, ವಶವಾಗಿ ಹೇಗಿದ್ದ ನಾನು ಹೇಗಾಗಿ ಹೋದೆ?
ನನ್ನ ಮನೆಯವರನ್ನೇಲ್ಲಾ ನಿನ್ನಲ್ಲೆ ಕಂಡೆ
ನನಗೆ ಎಲ್ಲಾ ಪ್ರೀತಿ ಕೊಡುವವನು ನೀನೇ ಎಂದುಕೊಂಡೆ?
ಅರೆ ಯಾಕೆ ಹೀಗಾದೆ ಅಂತ ಕಿಟಕಿಗೊರಗಿ ಯೋಚಿಸಿದರೆ
ಹೃದಯ ನಿನ್ನತ್ತ ಬೆರಳು ಮಾಡಿ ತೋರಿಸಿತ್ತೇ!
ಚಿಂದಿಯಾದ ನಿರ್ಜೀವ ವಸ್ತುಗಳನ್ನು ಒಗ್ಗೂಡಿಸಿ
ಸಜೀವ ಮಾಡುವ ಕೈಚಳಕ ನಿನ್ನದು
ಹರಿದ ನನ್ನ ಹೃದಯಕ್ಕೆ ನಿನ್ನ ಪ್ರೀತಿಯ ಆರೈಕೆ ಬೇಕಾಗಿದೆ.
ಮುರಿದ ನನ್ನ ಕನಸುಗಳಿಗೆ ನಿನ್ನ ಜೊತೆ ಬೇಕಾಗಿದೆ.....

ಸ್ನೇಹಮನಸ್ಸಿನ
ಆಳದಲ್ಲಿ
ನೆನಪಿನ ಅಲೆಯಲ್ಲಿ
ಇಲುಮೆಯ
ಜೀವಕ್ಕೆ
ಪ್ರೀತಿಯ
ಹೃದಯಕ್ಕೆ
ತಂಪನ್ನ ನೀಡುವುದೇ
ಈ....................
...............ಸ್ನೇಹ.

ನಿನ್ನೊಲವಿನ"ಅಮೃತಧಾರೆ"ಯಾಗಿ
ಬಾಳೆಂಬ ಭಾಳ ಗುಡಿಯಲ್ಲಿ
ಜೋತೆಜೊತೆಯಾಗಿ
ನಾ ಬರುವೆ
"ಮುಂಗಾರು ಮಳೆಯಂತೆ"

ಜನ್ಮ ಜನ್ಮದಾ
ಜನುಮದ ಜೋಡಿಯಾಗಿ
ಬದುಕಿನಲ್ಲಿ ಆಸರೆಯ
ಧೃವತಾರೆಯಾಗಿ
ನಿನ್ನೊಲವಿನ ಹಾದಿಯ
ಸಪ್ತಪದಿಯಲ್ಲಿ
ಬೆಳದಿಂಗಳ ಬಾಲೆಯಾಗಿ
ನಾ ಬರುವೆ!
-----------------
*****

Thursday, December 15, 2011

ಹೆಸರು..

ನಗುವ
ತಾವರೆಯನು ಹಿಡಿದು
ಚಂದಿರನೇ ನಾಚುವಂತೆ
ನಸುನಗುತಾ, ನಲಿಯುತಾ;
ನಿನ್ನ ಉಗುರಿನಿಂದ
ಅದೇ ತಾವರೆಯ
ಎಲೆ ಮೇಲೆ ಬರೆದಿದ್ದೆ,
ನೀ ನಿನ್ನ ಹೆಸರು


ಆಗ ಗೊತ್ತಾಯ್ತು
ಚೆಲುವೆ ನನಗೆ,
ತಾರೆಗಳ ನಡುವೆ ನಲಿವ
ಚಂದಿರನ ಕಾಂತಿಗಿಂತಲೂ
ಚೆಂದ ನಿನ್ನ ಹೆಸರು.


ಆ ತಾರೆಗಳ
ಜೋಡಿಸಿ, ಅದೇ
ನೀಲಾಕಾಶದಲ್ಲಿ ಮಿಂಚಾಗಿ
ನೋಡಬೇಕೆನಿಸಿತ್ತು ಕಣೇ
ನಿನ್ನ ಹೆಸರು.


ನಸುಕಿನಲಿ
ಮೂಡಿದ ಕಿರಣಗಳ
ಕಂಡು ಅರಳುವ ಸುಮಗಳ
ಪರಿಮಳದಲ್ಲಿ ಹಿಡಿದಿಡಬೇಕು
ಎನಿಸುತಿದೆ ನಿನ್ನ ಹೆಸರು.


ನಿನ್ನ ನಗುಮೊಗದ
ನೆನಪನ್ನೆ ಮತ್ತೆಮತ್ತೆ,
ತೆರೆತೆರೆಯಾಗಿ ಮೂಡಿಸುತ್ತಿದ್ದ,
ಸಮುದ್ರದ ಅಲೆಗಳಲ್ಲಿ
ಬಚ್ಚಿಡಬೇಕೆನಿಸುತಿದೆ ನಿನ್ನ ಹೆಸರು


ನನ್ನ ಹೃದಯದ
ರಕ್ತದ ಕಣಕಣದಲ್ಲೂ
ಮಿಂಚುತಿದೆ ನಿನ್ನ ಹೆಸರು
ಕಂಡಾಗ
ನವಿಲುಗರಿ ಹಿಡಿದಿದ್ದ ನಿನ್ನ
ಪುಸ್ತಕದ ಪುಟಗಳಲ್ಲೆಲ್ಲಾ
"
ನಿನ್ನ ಹೆಸರು".
(ನಾ) ನಮಿತ.

Tuesday, October 18, 2011

ಕಂಪ್ಯೂಟರ್ ಪ್ರೇಮ ಪತ್ರ..ಇದೊಂದು ಪಕ್ಕಾ Technical Love Letterru…!ಒಬ್ಬ Computer Engineer ಬರೆದದ್ದು(ಕೊರೆದದ್ದು…!)————————-ಹಾಯ್ …!
Monitor ಮಾದೇವಿಯೇ…! CPU ಶ್ರೀದೇವಿಯೇ…! ಹೇಗಿರುವೆ…? ಎಲ್ಲಿರುವೆ..?
ನನ್ನ ಹೃದಯದ HardDisk ನಲ್ಲಿ, ನಿನ್ನ ಕನಸುಗಳೆಂಬ Files ಗಳ save ಮಾಡಿ, ನೆನಪುಗಳೆಂಬ (ಸಿಹಿ) Virus ತುಂಬಿ, ಹೇಳದೇ ಕೇಳದೆ ಎಲ್ಲಿಗೆ ಹೋದೆ..!?? ಕ್ಷಮೆ ಇರಲಿ ಈ ಮಾತ್ ಹೇಳ್ತಾ ಇರೋದಕ್ಕೆ…,ನನ್ನ ಈ ಹೃದಯವೆಂಬ HardDisk ಕೇವಲ ನಿನಗಾಗಿ ಮೀಸಲಲ್ಲ ಕಣೇ…! ಅದು ನನ್ನ ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಬಂದು ಮಿತ್ರರೆಲ್ಲರಿಗೂ ಸೇರಿದೆ..!ಅದರಲ್ಲಿ ಮೂರಾರು Partition ಮಾಡಿ, ಹಂಚಿ, ಒಬ್ಬೊಬ್ಬರಿಗೂ ಮೀಸಲಿಟ್ಟಿದ್ದೇನೆ..! ಅದು ಸರಿಯಾ ನಂಗೊತ್ತಿಲ್ಲ…! ಆದ್ರೆ ತಪ್ಪಾಗಿರಲಾರದು…! Ofcorse..,ನನ್ನ ತಾಯಿ-ತಂದೆ ನಂತರದ ಸ್ಥಾನ ನಿನಗೇನೆ…! ನಿನಗೆ ವಸಿ ಜಾಸ್ತಿಯೇ Space ಮೀಸಲಾಗಿದೆ..!ಅದು ಎಷ್ಟು GB ಯೋ ನಾ ಹೆಳಲಾರೆ..! ಆದ್ರೆಆದ್ರೆ, ತಿಳ್ಕೋ ನಿನಗಾಗಿ ಮೀಸಲಿಟ್ಟಿದ್ದ ಜಾಗ ಪೂರ ಇಂದು.. ಬರಿ ನಿನ್ನ ನೆನಪುಗಳೆಂಬ Virusಗಳಿಂದ Attack ಆಗಿದೆ..!ಯಾವ AntiVirus(ಬೇರೆ ಹುಡುಗಿಯರು…!) ಕೂಡ install ಆಗ್ತಿಲ್ಲ, ಅದ್ರೂ ಆ Virusಗಳನ್ನ Remove ಮಾಡಿ Delete ಮಾಡಲಿಕ್ಕೆ ಆಗ್ತಿಲ್ಲ..! ಇದಕ್ಕೆ Admisnistrator(ಆಡಳಿತಗಾರ್ತಿ…!) ಅಂದ್ರೆ ನಿನ್ನ ಜರೂರತ್ ಇದೆ..! ಅವೆಲ್ಲವನ್ನ ನಿನ್ನ ‘ನಗು, ಪ್ರೀತಿ .. ‘ ಎಂಬ Software install ಮಾಡಿ ಸರಿಪಡಿಸಬೇಕು…! ನೀನು ನನ್ನ ಪಾಲಿಗೆ ಕೇವಲ “ನೆನಪು” ಆಗ್ಬೇಡ.. ಬಾಳಿನ ಉದ್ದಗಲಕ್ಕೂ ಬದುಕೋ “ಕ್ಷಣ”ಗಳಾಗಬೇಕು…! ಮೆದುಳೆಂಬ Processor On ಆಗಿ, Run ಆಗ್ತಿರೋ ತನಕ, ಮಿನುಮಿರುಗೋ Mionitor ಆಗ್ಬೇಕು.. ನನ್ನ ಬಾಳೆಂಬ Taskಗೆ ಬೆಳಕಾಗಬೇಕು..!ಅದು ಹೇಗೆ, ಎಲ್ಲಿ, ಯಾವಾಗ ನಂಗೊತ್ತಿಲ್ಲ..! ಈ ಪ್ರೀತಿ ಎಂಬ ಅಂತರ್ಜಾಲ.. Sorry ಮಾಯಾಜಾಲದಲ್ಲಿ, ನಾನಂತು ಸಿಕ್ಕಿ ಒದ್ದಾಡುತಿದ್ದೇನೆ..! ಇಲ್ಲೇ ಬಿದ್ದಿರ್ಲಿ Bloody Heart Hacker ಅಂಥ ಸುಮ್ಮನಾಗ್ತಿಯೋ.., ಅಥವಾ ನನ್ನ Love software ನ ನಿನ್ನ ಎದೆಗೂಡಿನ Heart ಎಂಬ Hardiskನಲ್ಲಿ install ಮಾಡ್ಕೋತಿಯೋ ನಿಂಗ್ ಬಿಟ್ಟಿದ್ದು…! ಮಾತಾಡೋಕ್ಕೆ ಮನಸಾದ್ರೆ Mailನಲ್ಲಿ ಮುನ್ಸೂಚನೆ ಕಳಿಸು..!, ಆದ್ರೆ ಅದರಲ್ಲಿ ಬರಿ “ಮೌನದ” Attachment ಬೇಡ..!ಕನಸಾಗಿ ಕಾಡಬೇಕೆನಿಸಿದರೆ ಒಂದೊಳ್ಳೆ Greeting ಕಾರ್ಡು ಕಳಿಸು.., ಅದ್ರಲ್ಲಿ ನಿನ್ನ ” image ” ಹಾಕದೆ ಇರಬೇಡ..! ಒಟ್ಟಿನಲ್ಲಿ ಈ ಜೀವ Shut Down ಆಗೋ ಮುನ್ನ, ಪ್ರೀತಿಯ Software ನ, ನಿನಗೋಸ್ಕರ್ ಅಂತಲೇ ಮೀಸಲಿಟ್ಟಿರೋ Spaceನಲ್ಲಿ install ಮಾಡು..!ಇಲ್ಲವಾ, Restart ಮಾಡು.. ಇನ್ನೊಂದ್ ಜನ್ಮ ಇದೆ ಅನ್ನೋದಾದ್ರೆ Wait ಮಾಡು…! Love me Or Hate me…!Kiss me Or Kill me..! Oh Darling, Plz Do Something to me…! ಹಾಗೆ ಸುಮ್ಮನೆ ಮಾತ್ರ ಇರಬೇಡ….! ಇಂತಿ,ನಿನಗೆ ಪ್ರೀತಿಯ Invitation ಕಳ್ಸಿ Approval ಗೆ ಕಾಯ್ತಾ ಇರೋ…,
{ಸಂಗ್ರಹ....}